ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲ ತೀರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಸೂರ್ಯಸ್ತ ಸಮಯದಲ್ಲಿ ಕಡಲ ತೀರದಲ್ಲಿನ ಗಾಳಿ ಪಟ ಉತ್ಸವ ನೋಡುಗರ ಕಣ್ಮನ ಸೆಳೆಯಿತು.
ಮಳೆಗಾಲದಲ್ಲಿ ಹತ್ತು ಹಲವು ದುರಂತ ಸಂಭವಿಸಿದ ಉತ್ತರ ಕನ್ನಡ ಜಿಲ್ಲೆ ಮತ್ತೆ ಪ್ರವಾಸಿಗರಿಗೆ ಕೈ ಬಿಸಿ ಕರೆಯುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲ ತೀರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಸೂರ್ಯಸ್ತ ಸಮಯದಲ್ಲಿ ಕಡಲ ತೀರದಲ್ಲಿನ ಗಾಳಿ ಪಟ ಉತ್ಸವ ನೋಡುಗರ ಕಣ್ಮನ ಸೆಳೆಯಿತು.
ಒಂದೆಡೆ ಎಂತವರನ್ನು ಸಹ ಆಕರ್ಷಿಸುವಂತಹ ಕಡಲ ತೀರದಲ್ಲಿನ ಸೂರ್ಯಾಸ್ತದ ದೃಶ್ಯ. ಇನ್ನೊಂದೆಡೆ ಇಂತಹ ಸುಂದರ ಪರಿಸರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಸೇರಿ ಗಾಳಿ ಪಟವನ್ನ ಕೈನಲ್ಲಿ ಹಿಡಿದು ಹಾರಿಸುತ್ತಾ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು, ಸಾಯಂಕಾಲದ ಸಮಯದಲ್ಲಿ ಕಣ್ಮನ ಸೆಳೆಯುವ ಅಲೆಗಳ ಅಬ್ಬರ. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ.
ವಿಶ್ವ ಪ್ರವಾಸೋದ್ಯಮ ದಿನದ ಹಿನ್ನಲೆಯಲ್ಲಿ ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆ ಇಂದು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಕಾರವಾರ ನಗರದ ಪ್ರಸಿದ್ಧ ಠಾಗೋರ್ ಕಡಲ ತೀರದಲ್ಲಿ ಈ ಸ್ಪರ್ಧೆ ಆಯೋಜಿಸಿದ್ದು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.