Flash News
ಅತ್ಯಂತ ಹಳೆಯ ಮಾನವ ನಿರ್ಮಿತ ಅರಣ್ಯದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುವೆನು | ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳುವೈದ್ಯ
ಕಟಗಾರಕೊಪ್ಪದಲ್ಲಿ ಶಿವಶಾಂತಿಕಾ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ!
ಮುರುಡೇಶ್ವರ | ವಿದ್ಯಾರ್ಥಿನಿ ನೀರುಪಾಲು!
ತಂತ್ರಜ್ಞಾನ ಉಪಯೋಗಿಸಿ ಕಳುವಾಗಿದ್ದ ಮೊಬೈಲ್ ಪತ್ತೆಹಚ್ಚಿದ ಮುರುಡೇಶ್ವರ ಠಾಣೆಯ ಪೋಲಿಸರು!
ಗುರುಗಳಿಗೆ “ಮಾರ್ಗ” ದರ್ಶನ ಮಾಡಿಸುತ್ತಿರುವ ಸಚಿವರು | ಶ್ರೀ ಶ್ರೀಶ್ರೀಮದ್ ವಿದ್ಯಾದೀಶ ತಿರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ!
ಶಸ್ತ್ರಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿದ ಉದ್ಯಮಿ ಮಾಸ್ತಪ್ಪ ನಾಯ್ಕ!
ಮುರುಡೇಶ್ವರ | ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಟ್ಯೂಷನ್ ಕ್ಲಾಸ್ ಉದ್ಘಾಟನೆ!
ಎಮ್.ಜಿ.ಎಮ್ ಹೆಬಳೆ ಶಾಖೆ ಹೊಸ ಕಟ್ಟಡದಲ್ಲಿ ಶುಭಾರಂಭ!
ಭಟ್ಕಳ | ಸರ್ಕಾರಿ ಆಸ್ಪತ್ರೆಯ ನಂತರ ಅತೀ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಚಿಕಿತ್ಸೆ ನಮ್ಮಲ್ಲಿ ಲಭ್ಯ | ಡಾ. ವಿಕ್ರಮ ಶೆಟ್ಟಿ

ಭರ್ಜರಿ ಕಲೆಕ್ಷನ್ ಮಾಡುತ್ತಿದ್ದ ಸಣ್ಣ ಬಜೆಟ್​ನ ಸಿನಿಮಾ, ಕತೆ ಏನು?

ಪ್ಯಾನ್ ಇಂಡಿಯಾ, ಸ್ಟಾರ್ ನಟರ ಸಿನಿಮಾಗಳ ನಡುವೆ ಸಣ್ಣ ಬಜೆಟ್ ಸಿನಿಮಾಗಳನ್ನು ಯಾರೂ ನೋಡುತ್ತಿಲ್ಲ ಎಂಬ ಕೂಗು ಕರ್ನಾಟಕದಲ್ಲಿದೆ, ಇದು ಒಂದು ಹಂತಕ್ಕೆ ನಿಜವೂ ಹೌದು, ಆದರೆ ತಮಿಳಿನ ಒಂದು ಸಣ್ಣ ಬಜೆಟ್ ಸಿನಿಮಾ ಭಾರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ವಿಶೇಷತೆ ಏನು?

ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಲ್ಲಿ ಸಣ್ಣ ಸಿನಿಮಾಗಳಿಗೆ ಉಸಿರಾಡಲು ಸಹ ಆಗುತ್ತಿಲ್ಲ, ಸಣ್ಣ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ, ಒಳ್ಳೆಯ ಸಿನಿಮಾ ಮಾಡಿದರೂ ಸಹ ಜನ ನೋಡುತ್ತಿಲ್ಲ ಎಂಬ ಆರೋಪ ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಇದೆ. ಕನ್ನಡದ ಮಟ್ಟಿದೆ ಇದು ತುಸು ನಿಜವೂ ಹೌದು, ಕನ್ನಡದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಂದ ಕೆಲವು ಒಳ್ಳೆಯ ಗುಣಮಟ್ಟದ ಸಣ್ಣ ಬಜೆಟ್​ನ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಕಂಡಿಲ್ಲ. ಆದರೆ ಪರಭಾಷೆಗಳಲ್ಲಿ ಸಣ್ಣ ಬಜೆಟ್​ನ ಸಿನಿಮಾಗಳು ಕಮಾಲ್ ಮಾಡುತ್ತಿವೆ.

ಇದೇ ವರ್ಷ ಬಿಡುಗಡೆ ಆದ ತಮಿಳಿನ ‘ಮಹಾರಾಜ’ ಸಿನಿಮಾ ಚಿತ್ರಮಂದಿರದಲ್ಲಿ ಮತ್ತು ಒಟಿಟಿ ಎರಡರಲ್ಲೂ ಮೊಡಿಯನ್ನೇ ಮಾಡಿತು. ಸುಮಾರು 10-15 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಸುಮಾರು 100 ಕೋಟಿ ಹಣ ಗಳಿಸಿತು. ತೆಲುಗಿನಲ್ಲೂ ಸಹ ಇತ್ತೀಚೆಗೆ ಬಂದ ಕೆಲವು ಸಣ್ಣ ಬಜೆಟ್ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದವು. ಮಲಯಾಳಂನಲ್ಲಿ ಬಿಡಿ ಅಲ್ಲಿ ಸಣ್ಣ ಬಜೆಟ್ ಸಿನಿಮಾಗಳೇ ಸೂಪರ್ ಹಿಟ್ ಆಗುವುದು. ಇದೀಗ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿರುವ ತಮಿಳು ಸಿನಿಮಾ ಒಂದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಹೆಸರು ‘ಲಬ್ಬರ್ ಪಂದು’ (ರಬ್ಬರ್ ಚೆಂಡು).

ಹಳ್ಳಿಯಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಮೆಂಟ್​ ಬಗೆಗಿನ ಕತೆ ಒಳಗೊಂಡಿರುವ ಈ ಸಿನಿಮಾ ತಮಿಳುನಾಡು ಮಾತ್ರವಲ್ಲದೆ ಇದೀಗ ತೆಲುಗಿಗೆ ಡಬ್ ಆಗಿ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಕೇವಲ 5 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿರುವ, ಯಾವುದೇ ಸ್ಟಾರ್ ನಟರು ಇಲ್ಲದಿರುವ ಈ ಸಿನಿಮಾ ಕೆಲವೇ ವಾರದಲ್ಲಿ 30 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇದೀಗ ವಿದೇಶದಲ್ಲಿಯೂ ಬಿಡುಗಡೆ ಆಗಲು ಸಜ್ಜಾಗಿದ್ದು, ಸಿನಿಮಾದ ಗಳಿಕೆ ಡಬಲ್ ಆಗುವ ಎಲ್ಲ ಸೂಚನೆಗಳಿವೆ.

ಹಳ್ಳಿಯಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಯ ಕತೆಯನ್ನೇ ಸ್ವಾರಸ್ಯಕರವಾಗಿ, ರಸಮಯವಾಗಿ, ಹಳ್ಳಿ ಪರಿಸರ, ಕ್ರಿಕೆಟ್ ಆಡುವವರ ಜೀವನ, ಕುಟುಂಬ, ಅವರ ಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಸುಂದರವಾದ ಕತೆ ಹೆಣೆದಿದ್ದಾರೆ ನಿರ್ದೇಶಕ ತಮಿಳರಸನ್ ಮತ್ತು ಪಚ್ಚುಮುತ್ತು. ಸಿನಿಮಾದಲ್ಲಿ ಕ್ರಿಕೆಟ್ ಜೊತೆಗೆ, ರಾಜಕೀಯ, ಜಾತೀಯತೆ, ಪ್ರೀತಿ, ಕ್ರಿಕೆಟ್ ಬಗೆಗಿನ ಪ್ರೀತಿ, ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್, ಕ್ರೀಡಾ ಸ್ಪೂರ್ತಿ ಎಲ್ಲವೂ ಇದೆ. ಇದೇ ಕಾರಣಕ್ಕೆ ಸಿನಿಮಾ ಯುವಕರಿಗೆ ಹೆಚ್ಚು ಇಷ್ಟವಾಗುತ್ತಿದೆ.

Leave a Reply

Your email address will not be published. Required fields are marked *

Back To Top