Flash News
ಪ್ರವಾಸಿಗರಿಗೆ ಕಡಲ ತೀರ ನಿರ್ಬಂಧಿಸುವುದು ಅನಾಹುತಕ್ಕೆ ಪರಿಹಾರವಲ್ಲ! | ಕೃಷ್ಣ ನಾಯ್ಕ
ಅತ್ಯಂತ ಹಳೆಯ ಮಾನವ ನಿರ್ಮಿತ ಅರಣ್ಯದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುವೆನು | ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳುವೈದ್ಯ
ಕಟಗಾರಕೊಪ್ಪದಲ್ಲಿ ಶಿವಶಾಂತಿಕಾ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ!
ಮುರುಡೇಶ್ವರ | ವಿದ್ಯಾರ್ಥಿನಿ ನೀರುಪಾಲು!
ತಂತ್ರಜ್ಞಾನ ಉಪಯೋಗಿಸಿ ಕಳುವಾಗಿದ್ದ ಮೊಬೈಲ್ ಪತ್ತೆಹಚ್ಚಿದ ಮುರುಡೇಶ್ವರ ಠಾಣೆಯ ಪೋಲಿಸರು!
ಗುರುಗಳಿಗೆ “ಮಾರ್ಗ” ದರ್ಶನ ಮಾಡಿಸುತ್ತಿರುವ ಸಚಿವರು | ಶ್ರೀ ಶ್ರೀಶ್ರೀಮದ್ ವಿದ್ಯಾದೀಶ ತಿರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ!
ಶಸ್ತ್ರಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿದ ಉದ್ಯಮಿ ಮಾಸ್ತಪ್ಪ ನಾಯ್ಕ!
ಮುರುಡೇಶ್ವರ | ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಟ್ಯೂಷನ್ ಕ್ಲಾಸ್ ಉದ್ಘಾಟನೆ!
ಎಮ್.ಜಿ.ಎಮ್ ಹೆಬಳೆ ಶಾಖೆ ಹೊಸ ಕಟ್ಟಡದಲ್ಲಿ ಶುಭಾರಂಭ!

Lebanon: ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷ; ಲೆಬನಾನ್​ನಲ್ಲಿ ಭಾರತದ 900 ಸೈನಿಕರು, ಯಾರ ಪರ ಕೆಲಸ ಮಾಡ್ತಿದ್ದಾರೆ ಗೊತ್ತಾ?

ಲೆಬನಾನ್: ಹಮಾಸ್​ನ (Hamas) ಕೃತ್ಯದ ಪರಿಣಾಮಗಳನ್ನು (Consequences) ಇಡೀ ಪಶ್ಚಿಮ ಏಷ್ಯಾ (West Asia) ಅನುಭವಿಸಬೇಕಾಗಿದೆ. ಇಸ್ರೇಲ್-ಹಿಜ್ಬುಲ್ಲಾ (Israel-Hezbollah) ಜೊತೆಗೆ, ಈಗ ಇರಾನ್‌ನೊಂದಿಗಿನ ಯುದ್ಧದ ಭಯವೂ ಗಾಢವಾಗಿದೆ, ಇದು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಬಹುದು. ಈ ನಡುವೆ ಇಸ್ರೇಲ್ ಲೆಬನಾನ್‌ನಲ್ಲಿ (Lebanon) ಭೂದಾಳಿಯನ್ನು ಪ್ರಾರಂಭಿಸಿದೆ. ಇಂತಹ ಸಮಯದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ. ಇದೆಲ್ಲದರ ನಡುವೆಯೂ 900ಕ್ಕೂ ಹೆಚ್ಚು ಭಾರತೀಯ ಸೈನಿಕರು ದಕ್ಷಿಣ ಲೆಬನಾನ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ದಕ್ಷಿಣ ಲೆಬನಾನ್​ನಲ್ಲಿ ಇಸ್ರೇಲ್ ಭೂದಾಳಿ ನಡೆಸಿರುವುದು ದೊಡ್ಡ ವಿಷಯ. ಈ ಪ್ರದೇಶವನ್ನು ಹಿಜ್ಬುಲ್ಲಾದ ಸುರಕ್ಷಿತ ತಾಣವೆಂದು ಪರಿಗಣಿಸಲಾಗಿದೆ, ಆದ್ದರಿಂದ ಭೀಕರ ಸಶಸ್ತ್ರ ಸಂಘರ್ಷದ ನಡುವೆ ಭಾರತೀಯ ಸೈನಿಕರು ಅಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ? ದಕ್ಷಿಣ ಲೆಬನಾನ್‌ನಲ್ಲಿ ಭಾರತೀಯ ಸೈನಿಕರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ?

ವಿಶ್ವಸಂಸ್ಥೆಯ ಕಾರ್ಯಾಚರಣೆಯ ಭಾಗವಾಗಿ ಉಪಸ್ಥಿತಿ

ವಾಸ್ತವವಾಗಿ ದಕ್ಷಿಣ ಲೆಬನಾನ್‌ನಲ್ಲಿರುವ ಭಾರತೀಯ ಸೈನಿಕರು ವಿಶ್ವಸಂಸ್ಥೆಯ (UN) ಕಾರ್ಯಾಚರಣೆಯ ಭಾಗವಾಗಿ ಅಲ್ಲಿ ಉಪಸ್ಥಿತರಿದ್ದಾರೆ. ದಕ್ಷಿಣ ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆಯ ಮಧ್ಯಂತರ ಪಡೆ (UNIFIL) ಅಡಿಯಲ್ಲಿ ಭಾರತದ ಸೈನಿಕರು ತೊಂದರೆಗೀಡಾದ ದಕ್ಷಿಣ ಲೆಬನಾನ್‌ನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇಸ್ರೇಲ್‌ನ ಗಾಜಾ ದಾಳಿಯ ನಂತರ, ಹಿಜ್ಬುಲ್ಲಾ ಕೂಡ ಹಮಾಸ್‌ ಜೊತೆ ಸೇರಿದೆ. ಲೆಬನಾನ್‌ನಿಂದ ಇಸ್ರೇಲ್‌ಗೆ ನಿರಂತರವಾಗಿ ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಲಾಯಿತು. ಅಂದಿನಿಂದ ನಿರಂತರವಾಗಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಲೆಬನಾನ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಂದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಇದರ ಹೊರತಾಗಿಯೂ, ಭಾರತೀಯ ಶಾಂತಿಪಾಲನಾ ಪಡೆ ಸಂಪೂರ್ಣ ಜಾಗರೂಕತೆಯಿಂದ ದಕ್ಷಿಣ ಲೆಬನಾನ್‌ನಲ್ಲಿ ಮುಂಭಾಗದಲ್ಲಿ ನಿಂತಿದೆ. ಭಾರತೀಯ ಸೈನಿಕರು ಸ್ಥಳೀಯ ನಾಗರಿಕರನ್ನು ರಕ್ಷಿಸುವ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top