ನಗರೋತ್ಥಾನ ಯೋಜನೆಯಡಿಯಲ್ಲಿ ಸೋನಾರಕೇರಿ ಯಿಂದ ಆಸರಕೇರಿ ರಸ್ತೆಗೆ ಡಾಂಬರಿಕರಣ ಮಾಡಲು ಅನುದಾನ ಬಿಡುಗಡೆಯಾಗಿ 2 ವರ್ಷ ಕಳೆದರು ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಹದಗೆಟ್ಟು ಹೋದ ರಸ್ತೆಯಲ್ಲಿ ಓಡಾಟ ದುಸ್ತರವಾಗಿದೆ.
ಆಸರಕೇರಿಯಲ್ಲಿ ಈ ಹಿಂದೆ ನಿರ್ಮಾಣ ಮಾಡಿದ ಕಾಂಕ್ರೀಟ್ ರಸ್ತೆಯೂ ತೀರಾ ಕಳಪೆಮಟ್ಟದಲ್ಲಿದೆ. ಒಳಚರಂಡಿ ನವೀಕರಣ ಕಾಮಗಾರಿಯೂ ಅವೈಜ್ಞಾನಿಕವಾಗಿ, ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದ್ದರಿಂದ ಮಳೆಗಾಲದ ಸಂದರ್ಭದಲ್ಲಿ ಒಳಚರಂಡಿಯಿಂದ ನೀರು ಹೊರಬಂದು ರಸ್ತೆಯ ಮೇಲೆ ಹರಿಯುವುದಲ್ಲದೆ ಅಕ್ಕಪಕ್ಕದ ಕುಡಿಯುವ ನೀರಿನ ಬಾವಿಗಳಿಗೂ ಸೇರಿ ನೀರು ಮಲಿನಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೆಂಕಟೇಶ ನಾಯ್ಕ, ಶ್ರೀಕಾಂತ ನಾಯ್ಕ, ಪಾಂಡು ನಾಯ್ಕ ಮತ್ತಿತರರು ಹಾಜರಿದ್ದರು
Post Views: 19