ಭಟ್ಕಳ : [ 20 ಅಕ್ಟೋಬರ್ ] ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಇಂದು ತಾಲೂಕಿನ ಮುಖ್ಯವೃತ್ತದ ಮೂಲಕ ಸಂಚರಿಸಿತು.
ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಭಟ್ಕಳ ಮುಖ್ಯವೃತ್ತದವರೆಗೆ ವಿವಿಧ ಸಾಂಸ್ಕ್ರತಿಕ ತಂಡಗಳೊಂದಿಗೆ ರಥವನ್ನು ಮೆರವಣಿಗೆಯ ಮೂಲಕ ಕರೆತರಲಾಗಿದ್ದು. ಮುಖ್ಯವೃತ್ತದಲ್ಲಿ ಸಹಾಯಕ ಆಯುಕ್ತರಾದ ಡಾ. ನಯನಾ ಎನ್ ಹಾಗೂ ತಹಶಿಲ್ಧಾರ ಅಶೋಕ್ ಭಟ್ ರಥಕ್ಕೆ ಹೂಮಾಲೆಯನ್ನು ಹಾಕಿ ರಥವನ್ನು ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ತಹಶಿಲ್ದಾರ ಅಶೋಕ ಭಟ್ ಮಾತನಾಡಿ ಕನ್ನಡ ನಾಡು, ನುಡಿಯ ಕುರಿತಾಗಿ ಜನರಲ್ಲಿ ಅರಿವು ಮೂಡಿಸಿ, ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಘನ ಸರ್ಕಾರ ವಿನೂತನವಾಗಿ ಜ್ಯೋತಿ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಎಂದರು.
ಅಂದಹಾಗೇ ನಿನ್ನೇ ಸಂಜೆ ಸಾಗರ ರಸ್ತೆಯ ಮಾರ್ಗವಾಗಿ ಭಟ್ಕಳಕ್ಕೆ ಆಗಮಿಸಿದ ರಥವನ್ನು ತಾಲೂಕಾ ಆಡಳಿತ ಸ್ವಾಗತಿಸಿಕೊಂಡು, ಇಂದು ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಮುರುಡೇಶ್ವರವನ್ನು ತಲುಪಲಿದ್ದು ಅಲ್ಲಿಂದ ನಾಳೆ ಹೊನ್ನಾವರ ತಾಲೂಕಿಗೆ ಸಂಚರಿಸಲಿದೆ.
ಈ ಸಂದರ್ಭದಲ್ಲಿ ಆರೋಗ್ಯ ನೀರಿಕ್ಷಕಿ ಸೋಜಿಯಾ ಸೋಮನ್, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ, ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಶಿಕ್ಷಕರಾದ ನಾರಾಯಣ ನಾಯ್ಕ, ಶ್ರೀಧರ್ ಶೇಟ್ ಮತ್ತಿತರರು ಇದ್ದರು.