ಹೊನ್ನಾವರ : ತಾಲೂಕಿನ ಮಹಿಮೆಯ ವ್ಯಕ್ತಿಯೊಬ್ಬರಿಗೆ ಸೊಂಟದ ಶಸ್ತ್ರಚಿಕಿತ್ಸೆ ಗಾಗಿ ಯಂಗ್ ಒನ್ ಇಂಡಿಯಾ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ಹಣಕಾಸಿನ ನೆರವು ಒದಗಿಸಿದ್ದಾರೆ. ಕೆಲಸ ಮಾಡುವ ಸಂದರ್ಭದಲ್ಲಿ ಎತ್ತರದ ಜಾಗದಿಂದ ಬಿದ್ದು ಸೊಂಟಕ್ಕೆ ಏಟು ಮಾಡಿಕೊಂಡ ಮಹಿಮೆಯ ನಿವಾಸಿ ಗಣೇಶ ನಾಯ್ಕರವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ಸೊಂಟದ ಶಸ್ತ್ರಚಿಕಿತ್ಸೆಗಾಗಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಮಾಸ್ತಪ್ಪ ನಾಯ್ಕರವರು, ಗಣೇಶ ನಾಯ್ಕರವರ ವೈದ್ಯಕೀಯ ಚಿಕಿತ್ಸೆಯ ವೆಚ್ಚಕ್ಕಾಗಿ 25 ಸಾವಿರ ರೂಪಾಯಿ ಹಣದ ನೆರವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ […]
ಮುರುಡೇಶ್ವರ | ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಟ್ಯೂಷನ್ ಕ್ಲಾಸ್ ಉದ್ಘಾಟನೆ!
ಭಟ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಶ ಕಾರ್ಯಕ್ರಮದಡಿಯಲ್ಲಿ ಜನತಾ ವಿದ್ಯಾಲಯ ಹೈಸ್ಕೂಲ್, ಮುರ್ಡೇಶ್ವರದಲ್ಲಿ SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಉತ್ತರಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸತೀಶ್ ಶೇಟ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ನಾಯ್ಕ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದರಾದ ಶ್ರೀಮತಿ […]
ಎಮ್.ಜಿ.ಎಮ್ ಹೆಬಳೆ ಶಾಖೆ ಹೊಸ ಕಟ್ಟಡದಲ್ಲಿ ಶುಭಾರಂಭ!
ಭಟ್ಕಳ : [ನವೆಂಬರ್ 25] ತಾಲೂಕಿನ ಶ್ರೀ ಮಹಾಗಣಪತಿ ಮಹಾಸತಿ ಸೌಹಾರ್ಧ ಪತ್ತಿನ ಸಹಕಾರಿ ಸಂಘ ನಿಯಮಿತ, ಹೆಬಳೆ ಶಾಖೆ ಇಂದು ಹೆಬಳೆಯ ಗಾಂಧಿನಗರದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಭಾಭವನ ಹತ್ತಿರ ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಸಹಕಾರಿಯ ಪ್ರಪ್ರಥಮ ಶಾಖೆಯಾಗಿ ಸಿದ್ಧಿವಿನಾಯಕ ದೇವಸ್ಥಾನ ರಸ್ತೆ, ಹೆಬಳೆಯಲ್ಲಿ ಫೆಬ್ರವರಿ 2019 ರಂದು ಆರಂಭಗೊಂಡ ಶಾಖೆಯು, ಗ್ರಾಮೀಣ ಭಾಗದಲ್ಲಿ ಸದಸ್ಯರಿಗೆ ಅನುಕೂಲವಾಗುವಂತೆ ಸಹಕಾರಿಯ ಅಧ್ಯಕ್ಷರಾದ ಶ್ರೀ ಈರಪ್ಪ ಮಂಜಪ್ಪ ನಾಯ್ಕ (ಗರ್ಡಿಕರ) ರವರ ಆಶಯದಂತೆ, ಉತ್ತಮ ವ್ಯವಹಾರವನ್ನು ಒಳಗೊಂಡು ಪ್ರಸ್ತುತ […]
ಭಟ್ಕಳ | ಸರ್ಕಾರಿ ಆಸ್ಪತ್ರೆಯ ನಂತರ ಅತೀ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಚಿಕಿತ್ಸೆ ನಮ್ಮಲ್ಲಿ ಲಭ್ಯ | ಡಾ. ವಿಕ್ರಮ ಶೆಟ್ಟಿ
ಭಟ್ಕಳ : ತಾಲೂಕಾ ಆಸ್ಪತ್ರೆ ಭಟ್ಕಳದ ಶ್ರೀನಾಗಯಕ್ಷೇ ಸಭಾಭವನದಲ್ಲಿ ರವಿವಾರದಂದು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಭಟ್ಕಳ, ತಾಲೂಕಾ ಆಸ್ಪತ್ರೆ ಭಟ್ಕಳ, ಕ್ರಿಯಾಶೀಲ ಗೆಳೆಯರ ಸಂಘ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಕೆ.ಎಸ್ ಹೆಗಡೆ ಆಸ್ಪತ್ರೆಯ ನುರಿತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಲಾಗಿತ್ತು ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಸ್ಪತ್ರೆಯ ಎಲಬು ಹಾಗೂ ಕೀಲು ತಜ್ಞ ಡಾ. ವಿಕ್ರಮ ಶೆಟ್ಟಿ ಮಾತನಾಡಿ, ಮಂಗಳೂರಿನ ನೆರ್ಲಕಟ್ಟೆಯ ಕೆ.ಎಸ್ ಹೆಗಡೆ ಆಸ್ಪತ್ರೆ ಕಳೆದ 25 […]
ಭಟ್ಕಳ | ಬೆಳ್ನಿಯಲ್ಲಿ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾದ ಮನೆ!
ಭಟ್ಕಳ : [ ನವೆಂಬರ್ 23 ] ತಾಲೂಕಿನ ಬೆಳ್ನಿ ಗ್ರಾಮದಲ್ಲಿರುವ ಮನೆಯೊಂದಕ್ಕೆ ಇಂದು ಸಂಜೆ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಬಾಗಶಃ ಸುಟ್ಟು ಕರಕಲಾಗಿದೆ. ಜ್ಯೋತಿ ಮೊಹನ ನಾಯ್ಕ ದಂಪತಿ ಸಂಜೆ 7 ಗಂಟೆಯ ಸುಮಾರಿಗೆ ದೇವರಿಗೆ ದೀಪ ಹಚ್ಚಿ ಮಗನನ್ನು ಕರೆದುಕೊಂಡು ಮಾರುಕಟ್ಟೆಗೆ ತೆರಳಿದ್ದರು. ಈ ಸಮಯದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದ್ದು, ಬೆಂಕಿಯನ್ನು ನೋಡಿ ಅಕ್ಕಪಕ್ಕದ ಮನೆಯವರು ಮನೆ ಯಜಮಾನ ಮೋಹನ್ ನಾಯ್ಕರವರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿರುವ ವಿಷಯವನ್ನು ತಿಳಿಸಿದ್ದಾರೆ. ಅಲ್ಲಿಂದ ಮನೆಗೆ ವಾಪಾಸ್ಸು […]
ನವೆಂಬರ್ 24 ರಂದು ಭಟ್ಕಳದಲ್ಲಿ ವೈಧ್ಯಕೀಯ ಶಿಬಿರ!
ಭಟ್ಕಳ : ತಾಲೂಕಿನ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ತಾಲೂಕಾ ಆಸ್ಪತ್ರೆ ಭಟ್ಕಳ ಹಾಗೂ ಕ್ರೀಯಾಶೀಲ ಗೆಳೆಯರ ಸಂಘ ಭಟ್ಕಳ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಖ್ಯಾತ ವೈದ್ಯರಿಂದ ಭಟ್ಕಳದ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಭಟ್ಕಳ ತಾಲೂಕಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಹೇಳಿದರು. ತಾಲೂಕಾ ಆಸ್ಪತ್ರೆಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 24 ರ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೂ ಕೆ.ಎಸ್ […]
ಅಂಗನವಾಡಿ ಶಾಲೆಯ ಪುಟಾಣಿ ಮಕ್ಕಳಿಗೆ ಕುರ್ಚಿ ಭಾಗ್ಯ ಕಲ್ಪಿಸಿದ ಯುವ ಉದ್ಯಮಿ ಮಾಸ್ತಪ್ಪ ನಾಯ್ಕ!
ಭಟ್ಕಳ : [ ನವೆಂಬರ್ 17 ] ತಾಲೂಕಿನ ಮುರುಡೇಶ್ವರದ ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 13 ಅಂಗವಾಡಿ ಶಾಲೆಗಳಿಗೆ ಯುವ ಉದ್ಯಮಿ ಯಂಗ್ ಒನ್ ಇಂಡಿಯಾ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ಪುಟಾಣಿ ಮಕ್ಕಳಿಗೆ ಖುರ್ಚಿಗಳನ್ನು ಹಸ್ತಾಂತರ ಮಾಡಿದರು. ವಿವಿಧ ಅಂಗನವಾಡಿ ಶಾಲೆಗಳಿಗೆ ಒಟ್ಟು 240 ಕುರ್ಚಿಗಳನ್ನು ಹಸ್ತಾಂತರ ಮಾಡಿದ ಶ್ರಿಯುತರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಊರ ನಾಗರಿಕರಿಂದ ಅಭಿಮಾನದ ಸನ್ಮಾನ ಸ್ವೀಕರಿಸಿದರು. ಪುಟಾಣಿ ಮಕ್ಕಳು ಅವರು ನೀಡಿದ ಖರ್ಚಿಯಲ್ಲಿ ಕುಳಿತು […]
ಗೊಂಡ ಸಮುದಾಯದ ಜಾತಿ ಪ್ರಮಾಣಪತ್ರ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ _ ಸಚಿವ ಮಂಕಾಳ ವೈದ್ಯ ಭರವಸೆ
ಭಟ್ಕಳ : [ ನವೆಂಬರ್ 16 ] ಗೊಂಡ ಸಮಾಜಕ್ಕೆ ಆರ್ ಡಿ ನಂಬರ್ ಹೊಂದಿರುವ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಿದ್ದೆ ಮಂಕಾಳ ವೈದ್ಯ, ಈ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಯೋಚಿಸದೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಚಿಂತಿಸುತ್ತಿದ್ದೆನೆ. ಗೊಂಡ ಸಮಾಜಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಸಿಕ್ಕೆ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು. ತಾಲೂಕಿನ ಕೊಣಾರ ಗ್ರಾಮದಲ್ಲಿ ನಡೆದ ಜನಸ್ಪಂದನಾ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು […]
ಭಟ್ಕಳ | ಪುರಸಭೆ ಮುಖ್ಯಾಧಿಕಾರಿಯ ಲಂಚಾವತಾರ | ಬೆಳಂಬಳಗ್ಗೆ ಬಿತ್ತಲ್ಲ ಮಿಕ ಹಳ್ಳಕ್ಕೆ!
ಭಟ್ಕಳ : [ ನವೆಂಬರ್ 15 ] ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಗುರುವಾರ ಬೆಳಿಗ್ಗೆ ಭಟ್ಕಳ ಪುರಸಭೆ ಕಛೇರಿಯ ಮೇಲೆ ಲೋಕಾಯುಕ್ತ ಪೋಲಿಸರ ತಂಡ ದಾಳಿ ನಡೆಸಿದ್ದು, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ದೂರುದಾರರಿಂದ 50 ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೋಲಿಸರ ಬಲೆಗೆ ಬಿದ್ದಿದ್ದಾರೆ. ದಾಳಿ ನಡೆಸಿ ಮಾತನಾಡಿದ ಲೋಕಾಯುಕ್ತ ಎಸ್.ಪಿ ಕುಮಾರ ಚಂದ್ರ, ದೂರುದಾರರ ಸಂಬಂಧಿಯೊಬ್ಬರು ಸೂಸಗಡಿ ವ್ಯಾಪ್ತಿಯಲ್ಲಿ 20 ಗುಂಟೆ ಜಾಗದಲ್ಲಿ ನೂತನವಾಗಿ ಮನೆ ಕಟ್ಟಿಸಿದ್ದು […]
ಭಟ್ಕಳ | ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ಪ್ರತಿಭಟನೆ ಅನುಮತಿಗಾಗಿ ತಹಶಿಲ್ದಾರರಿಗೆ ಮನವಿ!
ಭಟ್ಕಳ : [ ನವೆಂಬರ 14 ] ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಭಟ್ಕಳ ಘಟಕ ನವೆಂಬರ್ 25 ರಂದು ನಡೆಸಲು ಹೊರಟಿರುವ ಅಹೋರಾತ್ರಿ ಸತ್ಯಾಗೃಹ ಧರಣಿಗೆ ಅನುಮತಿ ನೀಡಲು ತಹಶಿಲ್ದಾರರು ಸಕ್ಷಮ ಪ್ರಾಧಿಕಾರವಲ್ಲವೆಂದು ಹೇಳುತ್ತಿರುವುದು ಬಾಲಿಶತನದ ನಡೆಯಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ್ ನಾಯ್ಕ ಹೇಳಿದರು. ಇಂದು ತಾಲೂಕಿನ ಆಡಳಿತ ಸೌಧದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಾರ್ಯಕರ್ತರು […]