ಭಟ್ಕಳ : ತಾಲೂಕಾ ಆಸ್ಪತ್ರೆ ಭಟ್ಕಳದ ಶ್ರೀನಾಗಯಕ್ಷೇ ಸಭಾಭವನದಲ್ಲಿ ರವಿವಾರದಂದು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಭಟ್ಕಳ, ತಾಲೂಕಾ ಆಸ್ಪತ್ರೆ ಭಟ್ಕಳ, ಕ್ರಿಯಾಶೀಲ ಗೆಳೆಯರ ಸಂಘ ಭಟ್ಕಳ ಇವರ ಸಹಯೋಗದಲ್ಲಿ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಕೆ.ಎಸ್ ಹೆಗಡೆ ಆಸ್ಪತ್ರೆಯ ನುರಿತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಲಾಗಿತ್ತು
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಸ್ಪತ್ರೆಯ ಎಲಬು ಹಾಗೂ ಕೀಲು ತಜ್ಞ ಡಾ. ವಿಕ್ರಮ ಶೆಟ್ಟಿ ಮಾತನಾಡಿ, ಮಂಗಳೂರಿನ ನೆರ್ಲಕಟ್ಟೆಯ ಕೆ.ಎಸ್ ಹೆಗಡೆ ಆಸ್ಪತ್ರೆ ಕಳೆದ 25 ವರ್ಷಗಳಿಂದ 1800 ಹಾಸಿಗೆಯೊಂದಿಗೆ ನಡೆಯುತ್ತಿರುವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಾಗಿದ್ದು, ಸರ್ಕಾರಿ ಆಸ್ಪತ್ರೆಯ ನಂತರ ಅತ್ಯಂತ ಕಡಿಮೆ ದರಪಟ್ಟಿಯನ್ನು ಹೊಂದಿರುವ ಆಸ್ಪತ್ರೆ ನಮ್ಮದು ಎಂದು ಅತ್ಯಂತ ದೈರ್ಯವಾಗಿ ಹೇಳುತ್ತೇನೆ. ಖಾಸಗಿ ಆಸ್ಪತ್ರೆಯೊಂದು ರೋಗಿಯೊಬ್ಬರ ಚಿಕಿತ್ಸೆಗಾಗಿ 1 ಲಕ್ಷ 40 ಸಾವಿರ ರೂಪಾಯಿ ತಗುಲುತ್ತದೆ ಎಂದು ಹೇಳಿದ್ದರು. ಆದರೆ ನಾವು ಅವರಿಗೆ 60 ಸಾವಿರ ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದೇವೆ. ನಮ್ಮಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ನೀಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆ ವರ್ಷಕ್ಕೆ 20 ರಿಂದ 25 ಶಿಬಿರಗಳನ್ನು ಮಾಡುತ್ತಿದ್ದೇವೆ. ನಮಲ್ಲಿ ಆಯುಸ್ಮಾನ್, ಯಶಸ್ವಿನಿ ಕಾರ್ಡ್ ಗಳಂತೆ ಆರೋಗ್ಯ ಕಾರ್ಡ್ ಗಳನ್ನು ಕೂಡ ವಿತರಿಸಲಾಗುತ್ತದೆ. ಕಾರ್ಡ್ ಪಡೆದುಕೊಂಡವರು ಅದಕ್ಕೆ ಅನುಗುಣವಾಗಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ತಾಲೂಕಾ ಆಸ್ಪತ್ರೆಯ ವೈದ್ಯರಾದ ಡಾ. ಲಕ್ಷ್ಮೀಶ ನಾಯ್ಕ, ಹಾಗೂ ಕೆ.ಎಸ್ ಹೆಗಡೆ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರಾದ ಡಾ. ವಿಕ್ರಮ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳಿಗ್ಗೆ 8 ಗಂಟೆಯಿಂದ ಕೆ.ಎಸ್ ಹೆಗಡೆ ಆಸ್ಪತ್ರೆಯ ನುರಿತ ವೈದ್ಯರಾದ ಡಾ. ವಿಕ್ರಮ ಶೆಟ್ಟಿ, ಡಾ.ಭರತ್ ನಾಯ್ಕ, ಡಾ.ಪ್ರಥ್ವಿ ಕೆ.ಪಿ ಮತ್ತು ಡಾ. ಅಭಿಜಿತ್ ಶೆಟ್ಟಿ ಶಿಬಿರದಲ್ಲಿ ಪಾಲ್ಗೊಂಡ ನೂರಾರು ಜನರನ್ನು ತಪಾಸಣೆ ನಡೆಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ್ ನಾಯ್ಕ, ಸಂಘದ ಎಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು, ಹಾಗೂ ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಸಂಘದ ಪಧಾದಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.