ಭಟ್ಕಳ : [ನವೆಂಬರ್ 25] ತಾಲೂಕಿನ ಶ್ರೀ ಮಹಾಗಣಪತಿ ಮಹಾಸತಿ ಸೌಹಾರ್ಧ ಪತ್ತಿನ ಸಹಕಾರಿ ಸಂಘ ನಿಯಮಿತ, ಹೆಬಳೆ ಶಾಖೆ ಇಂದು ಹೆಬಳೆಯ ಗಾಂಧಿನಗರದ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಭಾಭವನ ಹತ್ತಿರ ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಸಹಕಾರಿಯ ಪ್ರಪ್ರಥಮ ಶಾಖೆಯಾಗಿ ಸಿದ್ಧಿವಿನಾಯಕ ದೇವಸ್ಥಾನ ರಸ್ತೆ, ಹೆಬಳೆಯಲ್ಲಿ ಫೆಬ್ರವರಿ 2019 ರಂದು ಆರಂಭಗೊಂಡ ಶಾಖೆಯು, ಗ್ರಾಮೀಣ ಭಾಗದಲ್ಲಿ ಸದಸ್ಯರಿಗೆ ಅನುಕೂಲವಾಗುವಂತೆ ಸಹಕಾರಿಯ ಅಧ್ಯಕ್ಷರಾದ ಶ್ರೀ ಈರಪ್ಪ ಮಂಜಪ್ಪ ನಾಯ್ಕ (ಗರ್ಡಿಕರ) ರವರ ಆಶಯದಂತೆ, ಉತ್ತಮ ವ್ಯವಹಾರವನ್ನು ಒಳಗೊಂಡು ಪ್ರಸ್ತುತ 574.42 ಲಕ್ಷ ರೂ. ಗಳ ಠೇವಣಿಯೊಂದಿಗೆ, ರೂ. 602.23 ಲಕ್ಷ ರೂ. ಸಾಲವನ್ನು `ಸದಸ್ಯರಿಗೆ ನೀಡಿದೆ. ನಿರ್ದೇಶಕರುಗಳ ಸಹಕಾರ, ಸಿಬ್ಬಂದಿಗಳ ಕಾರ್ಯಕ್ಷಮತೆ ಮತ್ತು ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಶಾಖೆ ಮುನ್ನಡೆದಿದೆ.
ಇದೀಗ ಗ್ರಾಹಕರ ಅನೂಕೂಲಕ್ಕೆ ತಕ್ಕಂತೆ ಹೊಸ ಕಟ್ಟಡಕ್ಕೆ ಶಾಖೆ ಸ್ಥಳಾಂತರಗೊಂಡಿದ್ದು. ಹೊಸ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಈರಪ್ಪ ನಾಯ್ಕ ಗರ್ಡಿಕರ್ ನೇತೃತ್ವದಲ್ಲಿ ಸಕಲ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಉದ್ಘಾಟನೆ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಸಂಘದ ಸಿಬ್ಬಂದಿಗಳು ಹಾಜರಿದ್ದರು.