ಭಟ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಶ ಕಾರ್ಯಕ್ರಮದಡಿಯಲ್ಲಿ ಜನತಾ ವಿದ್ಯಾಲಯ ಹೈಸ್ಕೂಲ್, ಮುರ್ಡೇಶ್ವರದಲ್ಲಿ SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಉತ್ತರಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸತೀಶ್ ಶೇಟ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ಗಣೇಶ್ ನಾಯ್ಕ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದರಾದ ಶ್ರೀಮತಿ ಉಷಾ ಭಟ್ ರವರು ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಶಾಲಾ ಆಡಳಿತ ಸಮಿತಿ ಯ ಅಧ್ಯಕ್ಷರು ಆದ ಶ್ರೀ ಎಸ್ ಎಸ್ ಕಾಮತ್ ರವರು ವಹಿಸಿ ಮಾತನಾಡಿ ಪೂಜ್ಯರ ಸಮಾಜಸೇವೆ, ಶೈಕ್ಷಣಿಕ ಕಾಳಜಿ ಮಾದರಿಯಾಗಿದೆ ಎಂದರು. ಶಿಕ್ಷಕರಾದ ಶ್ರೀ ಮಹೇಶ್ ರವರು ಸ್ವಾಗತಿಸಿದರು, ಶಿಕ್ಷಕರಾದ ಶ್ರೀಮತಿ ಆಶಾ ರವರು ವಂದಿಸಿದರು, ಮೇಲ್ವಿಚಾರಕರಾದ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.