ಭಟ್ಕಳ : [ 13 ನವೆಂಬರ್ ] ತಾಲೂಕಿನಲ್ಲಿ ತಲೆದೊರಿರುವ ರೇತಿ ಅಭಾವದ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಇಂದು ತಾಲೂಕಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆಟೋ ಚಾಲಕರ ಗಣೇಶೋತ್ಸವದ ಮೈದಾನದಲ್ಲಿ ಸಾವಿರಾರು ಕಾರ್ಮಿಕರು ಜಮಾವಣೆಗೊಂಡು ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಮುಖ್ಯವೃತ್ತದವರೆಗೂ ಸಾಗಿದ ಮೆರವಣಿಗೆ ಬಳಿಕ ಆಡಳಿತ ಸೌಧವನ್ನು ತಲುಪಿತು. ಮೆರವಣಿಗೆಯುದ್ದಕ್ಕೂ ಜಿಲ್ಲಾಡಳಿತ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ಪ್ರಯತ್ನಿಸಿದರು. ಪೋಲಿಸರು ಮದ್ಯಪ್ರವೇಶಿಸಿ ಮೆರವಣಿಗೆ […]
ಭಟ್ಕಳ | ಅರಣ್ಯ ಇಲಾಖೆಯ ವಸತಿಗೃಹ ಸಂಕೀರ್ಣ ಉದ್ಘಾಟನೆ
ಭಟ್ಕಳ : [ ನವೆಂಬರ್ 12 ] ಭಟ್ಕಳದಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ ಅವರ ಸಂಖ್ಯೆಗೆ ಅನುಗುಣವಾಗಿ ವಸತಿ ಗೃಹಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೆನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. ತಾಲೂಕಿನ ಸಾಗರ ರಸ್ತೆಯಲ್ಲಿ ಅರಣ್ಯ ಇಲಾಖೆಯ ಮುಂಚೂಣಿ ಅಧಿಕಾರಿಗಳಿಗೆ ಕಾಂಪಾ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗಿರುವ ವಸತಿಗೃಹ ಸಂಕಿರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಶಿಥಿಲಾವಸ್ಥೆಯಲ್ಲಿ ಇರುವ ವಸತಿ ಗೃಹಗಳನ್ನು ಕೂಡ ಮುಂದಿನ ದಿನಗಳಲ್ಲಿ ದುರಸ್ಥಿಪಡಿಸುವ ಅಥವಾ […]
ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಭಜನಾ ಕಾರ್ಯಕ್ರಮ ನವೆಂಬರ್ 12 ರಂದು
ಭಟ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಶಿರಾಲಿ ಗುಡಿಹಿತ್ಲು ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ವಾಡಿಕೆಯ ಕಾರ್ತಿಕ ಭಜನಾ ಮಹೋತ್ಸವ ತಾರೀಕು 12.11.2024 ನೇ ಮಂಗಳವಾರ ಬೆಳಿಗ್ಗೆಯಿಂದ ಪ್ರಾರಂಭಗೊಂಡು ಮರುದಿನ 13.11.2024 ಬುಧವಾರ ಪ್ರಾತಃಕಾಲದಲ್ಲಿ ಮಂಗಲದೊಂದಿಗೆ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭೀಮಾನದಿಯ ತಟದಲ್ಲಿರುವ ಈ ದೇವಸ್ಥಾನ ಇತಿಹಾಸ ಪ್ರಸಿದ್ದಿ ಪಡೆದಿದ್ದು,ಸಹಸ್ರಾರು ಭಕ್ತರ ಪರಮ ನಂಬಿಕೆಯ ತಾಣವಾಗಿದೆ.ತಲೆತಲಾಂತರ ಅನಾದಿಕಾಲದಿಂದಲೂ ಈ ದೇಗುಲದ ಕಾರ್ತಿಕ ಮಾಸದ ಭಜನಾ ಮಹೋತ್ಸವ ಅವಿಚ್ಚಿನ್ನ ಪರಂಪರೆಯ ದ್ಯೋತಕವಾಗಿ ನಡೆದುಕೊಂಡು ಬಂದಿರುತ್ತದೆ.ಈ ಭಜನಾ […]
ಭಟ್ಕಳ | ಹೊಂಯ್ಗಿಗಾಗಿ ಬೃಹತ್ ಪ್ರತಿಭಟನೆ ನವೆಂಬರ್ 13 ರಂದು!
ಭಟ್ಕಳ : [ ೧೧ ನವೆಂಬರ್ ] ಭಟ್ಕಳ ತಾಲೂಕಿನಾದ್ಯಂತ ಮರಳು ಅಲಭ್ಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಭಟ್ಕಳ ತಾಲೂಕ ಎಲ್ಲಾ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ನವೆಂಬರ್ ೧೩ ರ ಬುಧವಾರದಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಇಂಜಿನಿರ‍್ಸ್ ಆರ್ಕಿಟೆಕ್ಟ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ನಾಯಕ ತಿಳಿಸಿದರು. ತಾಲೂಕಿನ ಅಮೀನಾ ಪ್ಯಾಲೇಸ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು. ಮರಳನ್ನು ತಾಲೂಕಿನಾದ್ಯಂತ ಪೂರೈಸುವಲ್ಲಿ ಸರಕಾರ, ಜಿಲ್ಲಾಡಳಿತ, ತಾಲೂಕ ಆಡಳಿತ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ […]
ತಲಗೋಡ | ಪ್ರತಿಭೆಗೆ ಸಂದ ಪುರಸ್ಕಾರ!
ಭಟ್ಕಳ : [ 10 ನವೆಂಬರ್ ] ತಾಲೂಕಿನ ತಲಗೋಡ ಗ್ರಾಮದಲ್ಲಿ ಇಂದು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ, ತಲಗೋಡ ಕೂಟದ ವತಿಯಿಂದ 2023 – 24 ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘದ ಅಧ್ಯಕ್ಷರಾದ ವೆಂಕಟರಮಣ ನಾಯ್ಕ ಮಾತನಾಡಿ. ಪ್ರತಿವರ್ಷವು ನಾವು ಪ್ರತಿಭಾಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು. ಇಂದು ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಕೈಲಾಗದ ಜನರ ನೆರವಿಗೆ ಬರುವಂತಾಗಬೇಕು ಎಂದರು. […]
ಜೀವರಕ್ಷಕನಿಗೆ ಒಲಿದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ!
ಭಟ್ಕಳ : [ 09 ನವೆಂಬರ್ ] ತಾಲೂಕಿನ ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯ ಮೀನುಗಾರ ಕುಟುಂಬದ ಯುವಕ ಸುರೇಶ ಬಸವ ಖಾರ್ವಿ 2024 ನೇ ಸಾಲೀನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಪೋಲಿಸ ಪರೇಡ್ ಮೈದಾದಲ್ಲಿ ಅವರು ಜಿಲ್ಲಾಧಿಕಾರಿಗಳು ಹಾಗೂ ಸಚಿವ ಮಂಕಾಳ ವೈದ್ಯರವರ ಸಮ್ಮುಖದಲ್ಲಿ ಜೀವ ರಕ್ಷಕರಾಗಿ ಮಾಡಿದ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಇವರು ವಿವಿಧ ಪ್ರಕರಣಗಳಲ್ಲಿ ನೀರಿನಲ್ಲಿ ಮುಳುಗಿ ಸಾವಿನ ದವಡೆಯಲ್ಲಿದ್ದ […]
ಭಟ್ಕಳ | ಹಳ್ಳಿಮಕ್ಕಳಿಗೂ ಕರಾಟೆ ಶಿಕ್ಷಣ ದೊರಕಬೇಕು – ಕರಾಟೆ ಶಿಕ್ಷಕ ಸಂತೋಷ ಆಚಾರ್ಯ
ಭಟ್ಕಳ : [ 07 ನವೆಂಬರ್ ] ಹಳ್ಳಿಗಾಡಿನ ಮಕ್ಕಳಿಗೆ ಕರಾಟೆ ತರಬೇತಿಯನ್ನು ನೀಡಬೇಕೆಂಬ ಆಸೆ ತಮ್ಮ ಗುರುಗಳಾದ ದಿವಂಗತ ವಾಸು ನಾಯ್ಕ ಅವರಿಗಿತ್ತು. ಅವರ ಆಸೆಯನ್ನು ಪೂರೈಸುವ ಸಲುವಾಗಿ ಇಂದು ಹಳ್ಳಿಯಲ್ಲಿರುವ ಕನ್ನಡ ಶಾಲೆಯಲ್ಲಿ ಕರಾಟೆ ತರಬೇತಿಯನ್ನು ಪ್ರಾರಂಭ ಮಾಡಿದ್ದೇವೆ ಎಂದು ಭಟ್ಕಳದ ಪ್ರಸಿದ್ಧ ಕರಾಟೆ ತರಬೇತುದಾರರಲ್ಲಿ ಒಬ್ಬರಾದ ಸಂತೋಷ ಆಚಾರ್ಯ ಹೇಳಿದರು. ತಾಲೂಕಿನ ಕೊಡ್ಸುಳು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅವರು ತಮ್ಮ ಶೊಟೋಕಾನ್ ತರಬೇತಿ ಸಂಸ್ಥೆಯ ಅಡಿಯಲ್ಲಿ ಕರಾಟೆ ತರಬೇತಿ […]
ಭಟ್ಕಳ | ಜೇನುನೋಣ ದಾಳಿ | ಮಹಿಳೆಗೆ ತೀವೃನಿಗಾ ಘಟಕದಲ್ಲಿ ಚಿಕಿತ್ಸೆ!
ಭಟ್ಕಳ: [ 5 ನವೆಂಬರ್ ] ತಾಲೂಕಿನ ಜಾಲಿಕೋಡಿಯಲ್ಲಿ ಮಹಿಳೆಯೊಬ್ಬರು ಜೇನು ಕಡಿತಕ್ಕೆ ಒಳಗಾಗಿ ಗಂಭಿರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಮಾಸ್ತಮ್ಮ ಮಂಜಪ್ಪ ನಾಯ್ಕ ಎಂಬ ಮಹಿಳೆ ತಮ್ಮ ಮನೆಯ ಎದುರು ಬೆಳಿಗ್ಗೆ ಕಸ ಗುಡಿಸುತ್ತಿರುವಾಗ ಹೆಜ್ಜೇನ ಹಿಂಡೊಂದು ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಾಗ ಮಗ ಮತ್ತು ಸೊಸೆ ಮಹಿಳೆಯ ಸಹಾಯಕ್ಕೆ ದಾವಿಸಿದ್ದು ಅವರು ಕೂಡ ಜೇನು ನೋಣಗಳ ಕಡಿತಕ್ಕೆ ಒಳಗಾಗಿದ್ದಾರೆ. ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ತಾಲೂಕಾ ಆಸ್ಪತ್ರೆಗೆ […]
ಕನ್ನಡಾಂಬೆಗೆ ಅಗೌರವ ತೋರಿದ ಜಾಲಿ ಪ.ಪಂ ಅಧ್ಯಕ್ಷೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭುವನೇಶ್ವರಿ ಕನ್ನಡ ಸಂಘದಿಂದ ಸಹಾಯಕ ಆಯುಕ್ತರಿಗೆ ಮನವಿ!
ಭಟ್ಕಳ: [ 4 ನವೆಂಬರ್ ] ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆಯ ನಡೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಅವರು ಅಧಿಕಾರಿಗಳ ಎದುರೆ ಕನ್ನಡ ತಾಯಿಗೆ ಅಗೌರವ ತೋರಿಸಿದ್ದಾರೆ. ಅಂತಹ ಜನಪ್ರತಿನಿಧಿಯನ್ನು ನಾಡದ್ರೋಹಿಯೆಂದು ಪರಿಗಣಿಸಿ ವಜಾ ಮಾಡಬೇಕು ಎಂದು ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ನವೆಂಬರ್ 1 ರಂದು ಭಟ್ಕಳದ ತಾಲೂಕಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. […]
ಸಚಿವ ಮಂಕಾಳ ವೈದ್ಯ ಕೇವಲ ಮುಸ್ಲಿಂ ವೋಟುಗಳಿಂದ ಗೆದ್ದು ಬಂದಿಲ್ಲ, ಹಿಂದೂಗಳು ಕೂಡ ವೋಟು ಹಾಕಿದ್ದಾರೆ ಅವರ ಪರ ಮಾತನಾಡಿ-ಮಾಜಿ ಶಾಸಕ ಸುನಿಲ್ ನಾಯ್ಕ
ಭಟ್ಕಳ : [4 ನವೆಂಬರ್] ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ವಕ್ಫ್ ಮಂಡಳಿಯ ಮೂಲಕ ರೈತರ ಜಮೀನುಗಳನ್ನು ಕೊಳ್ಳೆಹೊಡೆಯಲು ಹೊರಟಿದೆ. ಸ್ವಂತ ಜಮೀನುಗಳನ್ನು ಮಾರಾಟ ಮಾಡಿದಾಗಲೂ ಆರ್.ಟಿ.ಸಿ ಯಲ್ಲಿ ಹೆಸರು ನಮೂದಾಗಲು 45 ದಿನಗಳು ತಗಲುತ್ತದೆ. ಆದರೆ ಸಿದ್ದರಾಮಯ್ಯ ಸರ್ಕಾರ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿ ರೈತರ ಜಮೀನನ್ನು ರಾತ್ರೋರಾತ್ರಿ ವಕ್ಫ ಮಂಡಳಿಯ ಹೆಸರಿಗೆ ವರ್ಗಾವಣೆ ಮಾಡುತ್ತಿದೆ ಎಂದು ಮಾಜಿ ಶಾಸಕ ಸುನಿಲ್ ನಾಯ್ಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರ […]