ಭಟ್ಕಳ : [ ಡಿಸೆಂಬರ್ 22 ] ಗ್ರಾಮೀಣ ಭಾಗದಲ್ಲಿ ಸಹಕಾರ ಸಂಸ್ಥೆಗಳು ನಿರ್ಮಾಣವಾಗುವುದರಿಂದ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಸಿಗುತ್ತದೆ. ಸಹಾಕಾರಿ ಸಂಘದಲ್ಲಿ ಉಳ್ಳವರು ಹಣವಿಡುತ್ತಾರೆ ಹಾಗೂ ಅವಶ್ಯಕತೆ ಇರುವವರು ಹಣವನ್ನು ಪಡೆದುಕೊಳ್ಳುತ್ತಾರೆ. ಈ ಇಬ್ಬರ ಸಹಕಾರವು ಬ್ಯಾಂಕ್ ಅಬಿವೃದ್ಧಿಗೆ ಸಹಕಾರಿಯಾಗುತ್ತದೆ. ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಕಟಗಾರಕೊಪ್ಪಾದಲ್ಲಿ ಶಿವಶಾಂತಿಕ ಪತ್ತಿನ ಸಹಕಾರಿ ಸಂಘದ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಮಾನ್ಯ ಜನರಿಗೆ ಅವರ ಅಗತ್ಯತೆಗೆ ಅನುಗುಣವಾಗಿ ಸಹಕಾರವಾಗಬೇಕು ಎಂಬ ನಿಟ್ಟಿನಲ್ಲಿ ಶಿವಶಾಂತಿಕಾ ಪತ್ತಿನ ಸಹಕಾರಿ ಸಂಘ ಹಳ್ಳಿಯಲ್ಲಿ ಶಾಖೆಯನ್ನು ತೆರೆದು ಸೇವೆಗಳನ್ನು ನೀಡುತ್ತಿರುವುದು ಸಂತಸದ ವಿಚಾರ ಎಂದರು.
ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿ ಕಟಗಾರಕೊಪ್ಪ ಭಾಗದಲ್ಲಿ ಯಾವುದೇ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿರಲಿಲ್ಲ ಈ ಭಾಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಾಖೆ ತೆರೆಯಲಾಗಿದೆ. ಲಭ್ಯವಿರುವ ಜಾಗದಲ್ಲಿಯೇ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ದೃಷ್ಠಿಯಿಂದ ಕಂಪ್ಯೂಟರ್ ವ್ಯವಸ್ಥೆ, ಭದ್ರತೆಗೆ ಬೇಕಾದ ಲಾಕರ್ ಹಾಗೂ ಸಿಸಿ ಟಿವಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಎಮ್.ಡಿ ನಾಯ್ಕ ಮಾತನಾಡಿದರು
ಸಚಿವ ಮಂಕಾಳ ಎಸ್ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿವಶಾಂತಿಕಾ ಪತ್ತಿನ ಸಹಕಾರಿ ಸಂಘ 13 ಕೋಟಿ ರೂ ವಹಿವಾಟನ್ನು ಹೊಂದಿದ್ದು ಮಾರುಕೇರಿಯಲ್ಲಿ ಮುಖ್ಯಶಾಖೆಯನ್ನು ಹೊಂದಿರುವ ಸಂಘ ಕುಂಟವಾಣಿಯಲ್ಲಿ ಒಂದು ಶಾಖೆಯನ್ನು ಹಾಗೂ ನೂತನವಾಗಿ ಕಟಕಾರಕೊಪ್ಪದಲ್ಲಿ ತನ್ನ 2 ನೇ ಶಾಖೆ ತೆರೆದಿದೆ.
ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಕಟಗಾರಕೊಪ್ಪ ಪಂಚಾಯತ್ ಅಧ್ಯಕ್ಷ ಮಾಸ್ತಿ ಗೊಂಡ, ಬ್ಯಾಂಕ್ ನ ಎಲ್ಲಾ ನಿರ್ಧೇಶಕರು ವೇಧಿಕೆಯಲ್ಲಿ ಉಪಸ್ಥಿತರಿದ್ದರು.