Flash News
ಪ್ರವಾಸಿಗರಿಗೆ ಕಡಲ ತೀರ ನಿರ್ಬಂಧಿಸುವುದು ಅನಾಹುತಕ್ಕೆ ಪರಿಹಾರವಲ್ಲ! | ಕೃಷ್ಣ ನಾಯ್ಕ
ಅತ್ಯಂತ ಹಳೆಯ ಮಾನವ ನಿರ್ಮಿತ ಅರಣ್ಯದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುವೆನು | ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳುವೈದ್ಯ
ಕಟಗಾರಕೊಪ್ಪದಲ್ಲಿ ಶಿವಶಾಂತಿಕಾ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ!
ಮುರುಡೇಶ್ವರ | ವಿದ್ಯಾರ್ಥಿನಿ ನೀರುಪಾಲು!
ತಂತ್ರಜ್ಞಾನ ಉಪಯೋಗಿಸಿ ಕಳುವಾಗಿದ್ದ ಮೊಬೈಲ್ ಪತ್ತೆಹಚ್ಚಿದ ಮುರುಡೇಶ್ವರ ಠಾಣೆಯ ಪೋಲಿಸರು!
ಗುರುಗಳಿಗೆ “ಮಾರ್ಗ” ದರ್ಶನ ಮಾಡಿಸುತ್ತಿರುವ ಸಚಿವರು | ಶ್ರೀ ಶ್ರೀಶ್ರೀಮದ್ ವಿದ್ಯಾದೀಶ ತಿರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ!
ಶಸ್ತ್ರಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡಿದ ಉದ್ಯಮಿ ಮಾಸ್ತಪ್ಪ ನಾಯ್ಕ!
ಮುರುಡೇಶ್ವರ | ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಟ್ಯೂಷನ್ ಕ್ಲಾಸ್ ಉದ್ಘಾಟನೆ!
ಎಮ್.ಜಿ.ಎಮ್ ಹೆಬಳೆ ಶಾಖೆ ಹೊಸ ಕಟ್ಟಡದಲ್ಲಿ ಶುಭಾರಂಭ!

ಗುರುಗಳಿಗೆ “ಮಾರ್ಗ” ದರ್ಶನ ಮಾಡಿಸುತ್ತಿರುವ ಸಚಿವರು | ಶ್ರೀ ಶ್ರೀಶ್ರೀಮದ್ ವಿದ್ಯಾದೀಶ ತಿರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ!

ಭಟ್ಕಳ : [ 5 ನವೆಂಬರ್ ] ಭಕ್ತರಿಗೆ ರಸ್ತೆ ನಿರ್ಮಿಸುವ ಮೂಲಕ‌ ಸಚಿವರು ದೇವರ ಸೇವೆಯನ್ನು ಮಾಡಿದ್ದಾರೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದ ಪರಪೂಜ್ಯ ಶ್ರೀ ಶ್ರೀ ಶ್ರೀಮದ್ ವಿದ್ಯಾದೀಶ ತಿರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿಯವರು ಹೇಳಿದರು.

ಪಟ್ಟಣದ ಜನಾತಾ ಬ್ಯಾಂಕ್ ಮುಖ್ಯಶಾಖೆಯ ಹಿಂದೆ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಚಿವರ ಗುರುಗಳ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆಯನ್ನು ಅತ್ಯಂತ ತ್ವರಿತ ಗತಿಯಲ್ಲಿ‌ ಮುಗಿಸಿಕೊಟ್ಟಿದ್ದಾರೆ. ನಾವು ಹೋಗುವ ಜಾಗದಲ್ಲಿ ಗುರುಗಳಿಗೆ ಹೊಸದಾದ ಮಾರ್ಗದ ದರ್ಶನ ಮಾಡಿಸುತ್ತಿದ್ದಾರೆ. ಅವರ ಕಾರ್ಯಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲಾ ಹೊಸ ಮಾರ್ಗದ ದರ್ಶನವಗುತ್ತಿರುವುದು ಸಂತಸಕರ ವಿಷಯವಾಗಿದೆ. ಒಬ್ಬ ರಾಜಕಾರಣಿಯಾದವನು ರಾಜಕಾರಣಕ್ಕೆ ಬರುವಾಗ ಸ್ವಹಿತಾಸಕ್ತಿಯನ್ನು ಬಿಟ್ಟು ಜನರಿಗೆ ಬಂದ ಸಂಕಷ್ಟವನ್ನು‌ ಪರಿಹರಿಸುವ ಮಾತುಗಳನ್ನಾಡುತ್ತಾನೆ. ಮಂಕಾಳ ವೈದ್ಯರು ಆ ಮಾತಿಗೆ ಬದ್ಧರಾಗಿ ಕೆಲಸಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಸಚಿವ ಮಂಕಾಳ ವೈದ್ಯ ಮಾತನಾಡಿ ಗುರುಗಳ ಸೇವೆ ಮಾಡುವುದು ನಮಗೆ ಒದಗಿದ ಬಂದ ಸೌಭಾಗ್ಯವಾಗಿದ್ದು. ಯಾವುದೇ ಗುರುಗಳಾದರೂ ಅವರು ನಮ್ಮ ಕ್ಷೇತ್ರದಲ್ಲಿರುವಾಗ ನಾನು ಕ್ಷೇತ್ರದ ಹೊರಗಿದ್ದರೆ ಬೇಸರವಾಗುತ್ತದೆ. ಗುರುಗಳ ಆಶಿರ್ವಾದ ಮಾರ್ಗದರ್ಶನ‌ ಬಹುಮುಖ್ಯವಾಗಿದ್ದು. ನಾವು ಗುರುಗಳ ಮುಂದೆ ತಲೆಬಾಗಿ ನಮಸ್ಕರಿಸಿದರೆ ಜೀವದಲ್ಲಿ ಬೇರೆಯವರಿಗೆ ತಲೆ ಬಾಗುವ ಪರಿಸ್ಥಿತಿ ಬರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಪ್ರದೀಪ ಪೈ, ಸುರೇಂದ್ರ ಶಾನಬಾಗ್, ಭಟ್ಕಳ ಎಜುಕೇಶನ್ ಟ್ರಸ್ಟನ್ ಟ್ರಸ್ಟಿ ಸುರೇಶ ನಾಯಕ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Back To Top