ಭಟ್ಕಳ : [ ನವೆಂಬರ್ 17 ] ತಾಲೂಕಿನ ಮುರುಡೇಶ್ವರದ ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 13 ಅಂಗವಾಡಿ ಶಾಲೆಗಳಿಗೆ ಯುವ ಉದ್ಯಮಿ ಯಂಗ್ ಒನ್ ಇಂಡಿಯಾ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ಪುಟಾಣಿ ಮಕ್ಕಳಿಗೆ ಖುರ್ಚಿಗಳನ್ನು ಹಸ್ತಾಂತರ ಮಾಡಿದರು. ವಿವಿಧ ಅಂಗನವಾಡಿ ಶಾಲೆಗಳಿಗೆ ಒಟ್ಟು 240 ಕುರ್ಚಿಗಳನ್ನು ಹಸ್ತಾಂತರ ಮಾಡಿದ ಶ್ರಿಯುತರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಊರ ನಾಗರಿಕರಿಂದ ಅಭಿಮಾನದ ಸನ್ಮಾನ ಸ್ವೀಕರಿಸಿದರು. ಪುಟಾಣಿ ಮಕ್ಕಳು ಅವರು ನೀಡಿದ ಖರ್ಚಿಯಲ್ಲಿ ಕುಳಿತು […]
ಭಟ್ಕಳ | ಪುರಸಭೆ ಮುಖ್ಯಾಧಿಕಾರಿಯ ಲಂಚಾವತಾರ | ಬೆಳಂಬಳಗ್ಗೆ ಬಿತ್ತಲ್ಲ ಮಿಕ ಹಳ್ಳಕ್ಕೆ!
ಭಟ್ಕಳ : [ ನವೆಂಬರ್ 15 ] ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಗುರುವಾರ ಬೆಳಿಗ್ಗೆ ಭಟ್ಕಳ ಪುರಸಭೆ ಕಛೇರಿಯ ಮೇಲೆ ಲೋಕಾಯುಕ್ತ ಪೋಲಿಸರ ತಂಡ ದಾಳಿ ನಡೆಸಿದ್ದು, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ದೂರುದಾರರಿಂದ 50 ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೋಲಿಸರ ಬಲೆಗೆ ಬಿದ್ದಿದ್ದಾರೆ. ದಾಳಿ ನಡೆಸಿ ಮಾತನಾಡಿದ ಲೋಕಾಯುಕ್ತ ಎಸ್.ಪಿ ಕುಮಾರ ಚಂದ್ರ, ದೂರುದಾರರ ಸಂಬಂಧಿಯೊಬ್ಬರು ಸೂಸಗಡಿ ವ್ಯಾಪ್ತಿಯಲ್ಲಿ 20 ಗುಂಟೆ ಜಾಗದಲ್ಲಿ ನೂತನವಾಗಿ ಮನೆ ಕಟ್ಟಿಸಿದ್ದು […]
ಭಟ್ಕಳ | ಅರಣ್ಯ ಇಲಾಖೆಯ ವಸತಿಗೃಹ ಸಂಕೀರ್ಣ ಉದ್ಘಾಟನೆ
ಭಟ್ಕಳ : [ ನವೆಂಬರ್ 12 ] ಭಟ್ಕಳದಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ ಅವರ ಸಂಖ್ಯೆಗೆ ಅನುಗುಣವಾಗಿ ವಸತಿ ಗೃಹಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೆನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. ತಾಲೂಕಿನ ಸಾಗರ ರಸ್ತೆಯಲ್ಲಿ ಅರಣ್ಯ ಇಲಾಖೆಯ ಮುಂಚೂಣಿ ಅಧಿಕಾರಿಗಳಿಗೆ ಕಾಂಪಾ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗಿರುವ ವಸತಿಗೃಹ ಸಂಕಿರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಶಿಥಿಲಾವಸ್ಥೆಯಲ್ಲಿ ಇರುವ ವಸತಿ ಗೃಹಗಳನ್ನು ಕೂಡ ಮುಂದಿನ ದಿನಗಳಲ್ಲಿ ದುರಸ್ಥಿಪಡಿಸುವ ಅಥವಾ […]
ಭಟ್ಕಳ | ಹೊಂಯ್ಗಿಗಾಗಿ ಬೃಹತ್ ಪ್ರತಿಭಟನೆ ನವೆಂಬರ್ 13 ರಂದು!
ಭಟ್ಕಳ : [ ೧೧ ನವೆಂಬರ್ ] ಭಟ್ಕಳ ತಾಲೂಕಿನಾದ್ಯಂತ ಮರಳು ಅಲಭ್ಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಭಟ್ಕಳ ತಾಲೂಕ ಎಲ್ಲಾ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ನವೆಂಬರ್ ೧೩ ರ ಬುಧವಾರದಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಇಂಜಿನಿರ‍್ಸ್ ಆರ್ಕಿಟೆಕ್ಟ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ನಾಯಕ ತಿಳಿಸಿದರು. ತಾಲೂಕಿನ ಅಮೀನಾ ಪ್ಯಾಲೇಸ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು. ಮರಳನ್ನು ತಾಲೂಕಿನಾದ್ಯಂತ ಪೂರೈಸುವಲ್ಲಿ ಸರಕಾರ, ಜಿಲ್ಲಾಡಳಿತ, ತಾಲೂಕ ಆಡಳಿತ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ […]
ಜೀವರಕ್ಷಕನಿಗೆ ಒಲಿದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ!
ಭಟ್ಕಳ : [ 09 ನವೆಂಬರ್ ] ತಾಲೂಕಿನ ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯ ಮೀನುಗಾರ ಕುಟುಂಬದ ಯುವಕ ಸುರೇಶ ಬಸವ ಖಾರ್ವಿ 2024 ನೇ ಸಾಲೀನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಪೋಲಿಸ ಪರೇಡ್ ಮೈದಾದಲ್ಲಿ ಅವರು ಜಿಲ್ಲಾಧಿಕಾರಿಗಳು ಹಾಗೂ ಸಚಿವ ಮಂಕಾಳ ವೈದ್ಯರವರ ಸಮ್ಮುಖದಲ್ಲಿ ಜೀವ ರಕ್ಷಕರಾಗಿ ಮಾಡಿದ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಇವರು ವಿವಿಧ ಪ್ರಕರಣಗಳಲ್ಲಿ ನೀರಿನಲ್ಲಿ ಮುಳುಗಿ ಸಾವಿನ ದವಡೆಯಲ್ಲಿದ್ದ […]
ಭಟ್ಕಳ | ಹಳ್ಳಿಮಕ್ಕಳಿಗೂ ಕರಾಟೆ ಶಿಕ್ಷಣ ದೊರಕಬೇಕು – ಕರಾಟೆ ಶಿಕ್ಷಕ ಸಂತೋಷ ಆಚಾರ್ಯ
ಭಟ್ಕಳ : [ 07 ನವೆಂಬರ್ ] ಹಳ್ಳಿಗಾಡಿನ ಮಕ್ಕಳಿಗೆ ಕರಾಟೆ ತರಬೇತಿಯನ್ನು ನೀಡಬೇಕೆಂಬ ಆಸೆ ತಮ್ಮ ಗುರುಗಳಾದ ದಿವಂಗತ ವಾಸು ನಾಯ್ಕ ಅವರಿಗಿತ್ತು. ಅವರ ಆಸೆಯನ್ನು ಪೂರೈಸುವ ಸಲುವಾಗಿ ಇಂದು ಹಳ್ಳಿಯಲ್ಲಿರುವ ಕನ್ನಡ ಶಾಲೆಯಲ್ಲಿ ಕರಾಟೆ ತರಬೇತಿಯನ್ನು ಪ್ರಾರಂಭ ಮಾಡಿದ್ದೇವೆ ಎಂದು ಭಟ್ಕಳದ ಪ್ರಸಿದ್ಧ ಕರಾಟೆ ತರಬೇತುದಾರರಲ್ಲಿ ಒಬ್ಬರಾದ ಸಂತೋಷ ಆಚಾರ್ಯ ಹೇಳಿದರು. ತಾಲೂಕಿನ ಕೊಡ್ಸುಳು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅವರು ತಮ್ಮ ಶೊಟೋಕಾನ್ ತರಬೇತಿ ಸಂಸ್ಥೆಯ ಅಡಿಯಲ್ಲಿ ಕರಾಟೆ ತರಬೇತಿ […]
ಭಟ್ಕಳ | ಜೇನುನೋಣ ದಾಳಿ | ಮಹಿಳೆಗೆ ತೀವೃನಿಗಾ ಘಟಕದಲ್ಲಿ ಚಿಕಿತ್ಸೆ!
ಭಟ್ಕಳ: [ 5 ನವೆಂಬರ್ ] ತಾಲೂಕಿನ ಜಾಲಿಕೋಡಿಯಲ್ಲಿ ಮಹಿಳೆಯೊಬ್ಬರು ಜೇನು ಕಡಿತಕ್ಕೆ ಒಳಗಾಗಿ ಗಂಭಿರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಮಾಸ್ತಮ್ಮ ಮಂಜಪ್ಪ ನಾಯ್ಕ ಎಂಬ ಮಹಿಳೆ ತಮ್ಮ ಮನೆಯ ಎದುರು ಬೆಳಿಗ್ಗೆ ಕಸ ಗುಡಿಸುತ್ತಿರುವಾಗ ಹೆಜ್ಜೇನ ಹಿಂಡೊಂದು ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಾಗ ಮಗ ಮತ್ತು ಸೊಸೆ ಮಹಿಳೆಯ ಸಹಾಯಕ್ಕೆ ದಾವಿಸಿದ್ದು ಅವರು ಕೂಡ ಜೇನು ನೋಣಗಳ ಕಡಿತಕ್ಕೆ ಒಳಗಾಗಿದ್ದಾರೆ. ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ತಾಲೂಕಾ ಆಸ್ಪತ್ರೆಗೆ […]
ಕನ್ನಡಾಂಬೆಗೆ ಅಗೌರವ ತೋರಿದ ಜಾಲಿ ಪ.ಪಂ ಅಧ್ಯಕ್ಷೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭುವನೇಶ್ವರಿ ಕನ್ನಡ ಸಂಘದಿಂದ ಸಹಾಯಕ ಆಯುಕ್ತರಿಗೆ ಮನವಿ!
ಭಟ್ಕಳ: [ 4 ನವೆಂಬರ್ ] ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆಯ ನಡೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಅವರು ಅಧಿಕಾರಿಗಳ ಎದುರೆ ಕನ್ನಡ ತಾಯಿಗೆ ಅಗೌರವ ತೋರಿಸಿದ್ದಾರೆ. ಅಂತಹ ಜನಪ್ರತಿನಿಧಿಯನ್ನು ನಾಡದ್ರೋಹಿಯೆಂದು ಪರಿಗಣಿಸಿ ವಜಾ ಮಾಡಬೇಕು ಎಂದು ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ನವೆಂಬರ್ 1 ರಂದು ಭಟ್ಕಳದ ತಾಲೂಕಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. […]
ಸಚಿವ ಮಂಕಾಳ ವೈದ್ಯ ಕೇವಲ ಮುಸ್ಲಿಂ ವೋಟುಗಳಿಂದ ಗೆದ್ದು ಬಂದಿಲ್ಲ, ಹಿಂದೂಗಳು ಕೂಡ ವೋಟು ಹಾಕಿದ್ದಾರೆ ಅವರ ಪರ ಮಾತನಾಡಿ-ಮಾಜಿ ಶಾಸಕ ಸುನಿಲ್ ನಾಯ್ಕ
ಭಟ್ಕಳ : [4 ನವೆಂಬರ್] ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ವಕ್ಫ್ ಮಂಡಳಿಯ ಮೂಲಕ ರೈತರ ಜಮೀನುಗಳನ್ನು ಕೊಳ್ಳೆಹೊಡೆಯಲು ಹೊರಟಿದೆ. ಸ್ವಂತ ಜಮೀನುಗಳನ್ನು ಮಾರಾಟ ಮಾಡಿದಾಗಲೂ ಆರ್.ಟಿ.ಸಿ ಯಲ್ಲಿ ಹೆಸರು ನಮೂದಾಗಲು 45 ದಿನಗಳು ತಗಲುತ್ತದೆ. ಆದರೆ ಸಿದ್ದರಾಮಯ್ಯ ಸರ್ಕಾರ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿ ರೈತರ ಜಮೀನನ್ನು ರಾತ್ರೋರಾತ್ರಿ ವಕ್ಫ ಮಂಡಳಿಯ ಹೆಸರಿಗೆ ವರ್ಗಾವಣೆ ಮಾಡುತ್ತಿದೆ ಎಂದು ಮಾಜಿ ಶಾಸಕ ಸುನಿಲ್ ನಾಯ್ಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರ […]
ಭಟ್ಕಳದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭವ್ಯ ಪಥಸಂಚಲನ!
ಭಟ್ಕಳ : [ ಅಕ್ಟೋಬರ್ 27 ] ವಿಜಯ ದಶಮಿಯ ಪ್ರಯುಕ್ತವಾಗಿ ಇಂದು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೃಹತ್ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಜೆ ದಿ ನ್ಯೂ ಇಂಗ್ಲೀಷ್ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಣವೇಶದಾರಿಗಳು ನೆರೆದಿದ್ದರು. ಸಂಘದ ಪ್ರಮುಖರ ಬೃಹತ್ ಪಥಸಂಚಲನಕ್ಕೆ ಚಾಲನೆ ನೀಡಿದರು. ನ್ಯೂ ಇಂಗ್ಲೀಷ ಶಾಲೆಯಿಂದ ಹೊರಟ ಪಥಸಂಚಲನ ಬಂದರು ರಸ್ತೆ ಆಸಕೇರಿ ತಿರುವಿನಲ್ಲಿ ಎರಡು ಕವಲುಗಳಾಗಿ ಸಂಚರಿಸಿತು. ಒಂದು ಕವಲು ಆಸರಕೇರಿ ರಸ್ತೆಯ ಮೂಲಕ ಹೊರಟು ಕೆಳಪೇಟೆಯ ಮೂಲಕ […]