ಭಟ್ಕಳ: ಸಚಿವರು ಮರಳು ಸಮಸ್ಯೆಯನ್ನು ಸೃಷ್ಠಿಸಿ ಇದನ್ನು ಉದ್ಯಮವಾಗಿಸುವ ಹುನ್ನಾರ ನಡೆಸುತ್ತಿದ್ದಾರೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲೂ ಮರಳು ಗಣಿಗಾರಿಕೆಯ ವಿರುದ್ಧ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹಸಿರುಪೀಠದಲ್ಲಿ ಪ್ರಕರಣ ದಾಖಲಿಸಿದ್ದರು. ಆ ಸಂದರ್ಭದಲ್ಲಿ ನಾನೂ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ, ಆಗಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ ಪಾಟೀಲರ ನೇತೃತ್ವದಲ್ಲಿ ಸಭೆ ನಡೆಸಿ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಎಲ್ಲಾ ಭಾಗದಲ್ಲೂ ಸುಲಭವಾಗಿ ರೇತಿ ಸಿಗುವಂತೆ ಮಾಡಿದ್ದೆ. ರೇತಿ ಸಮಸ್ಯೆಯನ್ನು […]