ಭಟ್ಕಳ : [ ನವೆಂಬರ್ 23 ] ತಾಲೂಕಿನ ಬೆಳ್ನಿ ಗ್ರಾಮದಲ್ಲಿರುವ ಮನೆಯೊಂದಕ್ಕೆ ಇಂದು ಸಂಜೆ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಬಾಗಶಃ ಸುಟ್ಟು ಕರಕಲಾಗಿದೆ. ಜ್ಯೋತಿ ಮೊಹನ ನಾಯ್ಕ ದಂಪತಿ ಸಂಜೆ 7 ಗಂಟೆಯ ಸುಮಾರಿಗೆ ದೇವರಿಗೆ ದೀಪ ಹಚ್ಚಿ ಮಗನನ್ನು ಕರೆದುಕೊಂಡು ಮಾರುಕಟ್ಟೆಗೆ ತೆರಳಿದ್ದರು. ಈ ಸಮಯದಲ್ಲಿ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದ್ದು, ಬೆಂಕಿಯನ್ನು ನೋಡಿ ಅಕ್ಕಪಕ್ಕದ ಮನೆಯವರು ಮನೆ ಯಜಮಾನ ಮೋಹನ್ ನಾಯ್ಕರವರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿರುವ ವಿಷಯವನ್ನು ತಿಳಿಸಿದ್ದಾರೆ. ಅಲ್ಲಿಂದ ಮನೆಗೆ ವಾಪಾಸ್ಸು […]