ಭಟ್ಕಳ : [ 07 ನವೆಂಬರ್ ] ಹಳ್ಳಿಗಾಡಿನ ಮಕ್ಕಳಿಗೆ ಕರಾಟೆ ತರಬೇತಿಯನ್ನು ನೀಡಬೇಕೆಂಬ ಆಸೆ ತಮ್ಮ ಗುರುಗಳಾದ ದಿವಂಗತ ವಾಸು ನಾಯ್ಕ ಅವರಿಗಿತ್ತು. ಅವರ ಆಸೆಯನ್ನು ಪೂರೈಸುವ ಸಲುವಾಗಿ ಇಂದು ಹಳ್ಳಿಯಲ್ಲಿರುವ ಕನ್ನಡ ಶಾಲೆಯಲ್ಲಿ ಕರಾಟೆ ತರಬೇತಿಯನ್ನು ಪ್ರಾರಂಭ ಮಾಡಿದ್ದೇವೆ ಎಂದು ಭಟ್ಕಳದ ಪ್ರಸಿದ್ಧ ಕರಾಟೆ ತರಬೇತುದಾರರಲ್ಲಿ ಒಬ್ಬರಾದ ಸಂತೋಷ ಆಚಾರ್ಯ ಹೇಳಿದರು. ತಾಲೂಕಿನ ಕೊಡ್ಸುಳು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅವರು ತಮ್ಮ ಶೊಟೋಕಾನ್ ತರಬೇತಿ ಸಂಸ್ಥೆಯ ಅಡಿಯಲ್ಲಿ ಕರಾಟೆ ತರಬೇತಿ […]